lirikcinta.com
a b c d e f g h i j k l m n o p q r s t u v w x y z 0 1 2 3 4 5 6 7 8 9 #

madhu madhura - mano murthy lyrics

Loading...

ಮಧು ಮಧುರ ಭಾವವು ಮೂಡುತಿದೆ
ನಯನದಲಿ ಪ್ರೀತಿಯ ವ್ಯಾಕರಣ
ಒಡಲಲ್ಲಿ ಪ್ರೇಮವು ಪಲ್ಲವಿಸಿ

ಎದೆಯೊಳಗೆ ಗುರುಲಘು ಧೀಮ್ತನನ
ಹೊಸಬಗೆಯ ಆಶೆಯು ಕಣ್ಣಲ್ಲಿ
ಗರಿಗೆದರಿದೆ ಪ್ರೇಮ ಕಥನ
ಒಲಿಯುತಿದೆ ಜೀವವು ನಿನ್ನೆಡೆಗೆ
ಗುನುಗುನಿಸಿದೆ ಪ್ರಣಯ ಕವನ

ಮಧು ಮಧುರ ಭಾವವು ಮೂಡುತಿದೆ
ನಯನದಲಿ ಪ್ರೀತಿಯ ವ್ಯಾಕರಣ

ಮನಸಿನ ಬಾನಿನಲ್ಲಿ
ಒಲವಿನ ರಂಗುಚೆಲ್ಲಿ
ನಿನ್ನನ್ನು ಸೇರುವಾಸೆ
ಶುರುವಾಗಿದೆ ಹೃದಯದಲ್ಲಿ
ಪ್ರೀತಿಯ ದಾರಿಯಲ್ಲಿ
ಅರಳಿದೆ ರಂಗವಲ್ಲಿ

ಮಧು ಮಧುರ ಭಾವವು ಮೂಡುತಿದೆ
ನಯನದಲಿ ಪ್ರೀತಿಯ ವ್ಯಾಕರಣ

ವಿರಹದಿ ಕಾದು ಕಾದು
ಮಿಲನದ ಸುಖವೇ ಬೇರೆ
ಸುರಿದರೂ ಪ್ರೀತಿ ಮಳೆಯು
ಬರಿದಾಗದು ಅನ್ನುತಾರೆ
ಕಣ್ಣಲೇ ಪ್ರೇಮ ಲಾಸ್ಯ
ತುಟಿಯಲಿ ಅಮೃತಧಾರೆ

ಮಧು ಮಧುರ ಭಾವವು ಮೂಡುತಿದೆ
ನಯನದಲಿ ಪ್ರೀತಿಯ ವ್ಯಾಕರಣ
ಒಡಲಲ್ಲಿ ಪ್ರೇಮವು ಪಲ್ಲವಿಸಿ
ಎದೆಯೊಳಗೆ ಗುರುಲಘು ಧೀಮ್ತನನ
ಹೊಸಬಗೆಯ ಆಶೆಯು ಕಣ್ಣಲ್ಲಿ
ಗರಿಗೆದರಿದೆ ಪ್ರೇಮ ಕಥನ
ಒಲಿಯುತಿದೆ ಜೀವವು ನಿನ್ನೆಡೆಗೆ
ಗುನುಗುನಿಸಿದೆ ಪ್ರಣಯ ಕವನ

Random Song Lyrics :

Popular

Loading...